Showing posts with label bhakta. Show all posts
Showing posts with label bhakta. Show all posts

Friday, April 3, 2026

ಬಹಳ ದಿನ ಆಯಿತಲ್ಲೋ, ಉದ್ಧವಾ!


ಹಿಂದಿನ ಒಂದು ಸಂಚಿಕೆಯಲ್ಲಿ, "ಅನಘ ನಿನ್ನ ನೋಡಿ ಮೋಹಿಸಿ" ಎನ್ನುವ ಶೀರ್ಷಿಕೆಯಡಿ ಶ್ರೀ ವಿಜಯದಾಸರ "ನಿನ್ನನಗಲಿ ಪೊಗಲಾರೆವೋ, ನೀರಜಾಕ್ಷ" ಎನ್ನುವ ಪದದ ಬಗ್ಗೆ ಸ್ವಲ್ಪ ವಿಚಾರ ಮಾಡಿದ್ದೆವು. ಈ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು ಮತ್ತು ಶ್ರೀ ವಿದ್ಯಾಭೂಷಣರು ಹಾಡಿರುವ ಈ ಪದವನ್ನು ಕೇಳಬಹುದು. ಇದೇ ಹಿನ್ನೆಲೆಯ ಶ್ರೀ ಪು. ತಿ. ನ. ಅವರ "ಕೃಷ್ಣನ ಕೊಳಲಿನಾ ಕರೆ" ಗೀತೆಯನ್ನೂ ಕೇಳಬಹುದು. 

ಶ್ರೀ ವಿಜಯದಾಸರ ನೇರ ಶಿಷ್ಯರು ಶ್ರೀ ಗೋಪಾಲದಾಸರು. ಅವರ "ನಾಳೆ ಬರುತೇನೆಂದು ಹೇಳಿ ಮಧುರೆಗೆ ಪೋಗಿ ಬಹಳದಿನ ಆಯಿತಲ್ಲೋ, ಉದ್ಧವಾ" ಅನ್ನುವ ಹಾಡು ಇದರ ಮುಂದಿನ ಭಾಗ ಅನ್ನುವಂತೆ ಇದೆ. ಅದರ ಬಗ್ಗೆ ಈಗ ಸ್ವಲ್ಪ ವಿಚಾರ ಮಾಡೋಣ. 

*****

ಮೊದಲಿಗೆ ಈ ಉದ್ಧವ ಯಾರು? ಅವನು ಈ ಗೋಪಿಯರನ್ನು ಕಂಡದ್ದು ಏಕೆ ಮತ್ತು ಎಲ್ಲಿ? ಇದರ ಹಿನ್ನೆಲೆ ತಿಳಿಯುವುದು ಬಹಳ ಅವಶ್ಯಕ. ಮಹಾಭಾರತ ಮತ್ತು ಶ್ರೀಮದ್ಭಾಗವತ ಮುಂತಾದ ಗ್ರಂಥಗಳಲ್ಲಿ ಬರುವ ಅನೇಕ ಶ್ರೀಕೃಷ್ಣ ಭಕ್ತರಲ್ಲಿ ಉದ್ಧವನೂ ಒಬ್ಬ. ಶ್ರೀಕೃಷ್ಣನ ಭಕ್ತರು ಅನೇಕ ಹಿನ್ನೆಲೆಯವರು. ಒಂದೆಡೆ ಭೀಷ್ಮ, ದ್ರೋಣ ಮುಂತಾದ ಹಿರಿಯರು ಉಂಟು. ಮತ್ತೊಂದೆಡೆ ವಿದುರ, ಅಕ್ರೂರ ಮೊದಲಾದವರೂ ಉಂಟು. ಸೋದರತ್ತೆಯ ಮಕ್ಕಳಾದ ಪಾಂಡವರು ಸೇರಿದ್ದಾರೆ. ಉದ್ಧವ, ಸಾತ್ಯಕಿ ಮುಂತಾದ ಯಾದವರೂ ಉಂಟು. ಸುದಾಮನಂತಹ ಸಹಪಾಠಿಯೂ ಉಂಟು. ಕುಬ್ಜೆಯಂತಹ ಕಂಸನ ದಾಸಿಯೂ ಹೌದು. ಬೃಂದಾವನದ ವಾಸಿಗಳಾದ ಗೋಪಿಕೆಯರ ಭಕ್ತಿಯಂತೂ ಜನಜನಿತ. ಹೀಗೆ ಶ್ರೀಕೃಷ್ಣನ ಭಕ್ತರ ಬಳಗ ಬಹಳ ದೊಡ್ಡದು. 

ಅರ್ಜುನಂತೆ ಉದ್ಧವನೂ ಶ್ರೀಕೃಷ್ಣನಿಗೆ ಹತ್ತಿರದ ನೆಂಟ. ಅವನು ಶ್ರೀಕೃಷ್ಣನಿಗೆ ಎರಡೂ ಕಡೆಯ ಬಂಧು. ಒಂದು ಕಡೆ ಶ್ರೀಕೃಷ್ಣನ ಚಿಕ್ಕಪ್ಪನ ಮಗ. ಇನ್ನೊಂದು ಕಡೆ ದೊಡ್ಡಮ್ಮನ ಮಗ. ಉದ್ಧವನ ಅಪ್ಪ ಕೃಷ್ಣನ ತಂದೆ ವಸುದೇವನ ತಮ್ಮನಾದ ದೇವಭಾಗ. ಉದ್ಧವನ ತಾಯಿ ದೇವಕಿಯಂತೆ ಕೃಷ್ಣನ ಸೋದರಮಾವ ಕಂಸನ ತಂಗಿ ಕಂಸೆ. (ದೇವಕಿಯು ಕಂಸನ ಚಿಕ್ಕಪ್ಪನಾದ ದೇವಕನ ಮಗಳು. ಹೀಗಾಗಿ ತಂಗಿ. ಕ೦ಸೆ ನೇರವಾಗಿ ತಂಗಿ). ಈ ಕಾರಣಗಳಿಂದ ಉದ್ಧವನಿಗೂ ಶ್ರೀಕೃಷ್ಣನಿಗೂ ನೋಡಲು ಬಹಳ ಹೋಲಿಕೆ ಇತ್ತಂತೆ. ಅವನು ಶ್ರೀಕೃಷ್ಣನಿಗಿಂತ ಒಂದೋ ಎರಡೋ ವರುಷ ದೊಡ್ಡವನಂತೆ. ವಯಸ್ಸಿನಲ್ಲೂ ಹೆಚ್ಚು ವ್ಯತ್ಯಾಸವಿಲ್ಲ. ಶ್ರೀಕೃಷ್ಣನ ರೀತಿಯಲ್ಲಿಯೇ ವೇಷ-ಭೂಷಣ ತೊಡುತ್ತಿದ್ದನಂತೆ. (ಮೇಲಿನ ಚಿತ್ರ ಈ ರೀತಿಯ ಹೋಲಿಕೆಯ ಮೇಲೆಯೇ ಚಿತ್ರಿಸಿದ್ದಾರೆ). 

ಉದ್ಧವ ಐದು ವರುಷದ ಚಿಕ್ಕ ಮಗುವಾಗಿದ್ದಾಗ ಅವನ ತಾಯಿ ಊಟದ ಸಮಯದಲ್ಲಿ ಭೋಜನಕ್ಕೆ ಕರೆದರೆ, "ಅಮ್ಮಾ, ಕೃಷ್ಣನ ಪೂಜೆ ಇನ್ನೂ ಮುಗಿದಿಲ್ಲ. ನನಗೆ ಹಸಿವಿಲ್ಲಾ ಅಮ್ಮ" ಅನ್ನುತ್ತಿದ್ದನಂತೆ. ಐದು ವರುಷದ ಉದ್ಧವನಿಗೆ ಮೂರು-ನಾಲ್ಕು ವರುಷದ ಕೃಷ್ಣನ ಪೂಜೆ ಹೇಗೆ? ಅದೂ ಕೃಷ್ಣ ಇದ್ದದ್ದು ಗೋಕುಲದಲ್ಲಿ. ಉದ್ಧವ ಇದ್ದದ್ದು ಮಧುರೆಯಲ್ಲಿ. ಹೀಗೆಂದು ಅನೇಕ ಪ್ರಶ್ನೆಗಳನ್ನು ಮಾಡಬಹುದು. ಲೌಕಿಕ ದೃಷ್ಟಿಯಿಂದ ಈ ಪ್ರಶ್ನೆಗಳು ಸಮಂಜಸವೇ. ಕೌರವ-ಪಾಂಡವರಿಗೆ ಅಜ್ಜನಾದ ಭೀಷ್ಮರಿಗೆ ಅವರ ಮೊಮ್ಮಕ್ಕಳ ಜೊತೆಯ ಕೃಷ್ಣನಲ್ಲಿ ಹೇಗೆ ಭಕ್ತಿ? ತಂದೆಯ ವಯಸ್ಸಿನವನಾದ ವಿದುರನಿಗೆ ಹೇಗೆ? ಭಕ್ತಿಯ ಸೆಲೆ ಮತ್ತು ಸೆಳೆತ, ಇವೆರಡೂ ಯಾವುದೇ ತರ್ಕಕ್ಕೆ ನಿಲುಕುವುದಿಲ್ಲ ಅನ್ನುವುದು ಅವರವರ ಅನುಭವದಿಂದ ತಿಳಿದುಕೊಳ್ಳಬೇಕಾದ ವಿಷಯ. 

*****

ಶ್ರೀಕೃಷ್ಣನಿಗೆ ಉದ್ಧವ ತನ್ನಲ್ಲಿಟ್ಟಿರುವ ಭಕ್ತಿಯ ಆಳ ಚೆನ್ನಾಗಿ ಗೊತ್ತಿತ್ತು. ಆದ್ದರಿಂದ ತಾನು ದೇಹತ್ಯಾಗ ಮಾಡುವ ಬಹಳ ಮೊದಲೇ ಉದ್ಧವನು ತನ್ನ ವಿರಹ ಸಹಿಸಲಾರನು ಎಂದು ತಿಳಿದು ಅವನನ್ನು ಹರಿದ್ವಾರಕ್ಕೆ ಕಳಿಸಿದ್ದನು ಎಂದು ಭಾಗವತ ಹೇಳುತ್ತದೆ. ಮಹಾಭಾರತದಲ್ಲಿ ಕುರುಕ್ಷೇತ್ರದ ಯುದ್ಧಭೂಮಿಯಲ್ಲಿ, ಎರಡು ಸೈನ್ಯಗಳ ನಡುವೆ ಶ್ರೀಕೃಷ್ಣನು ಅರ್ಜುನನಿಗೆ ಉಪದೇಶ ಮಾಡಿದ "ಭಗವದ್ಗೀತೆ" ಲೋಕ ಪ್ರಸಿದ್ಧ. ಹೀಗೆಯೇ ಶ್ರೀಮದ್ಭಾಗವತದ ಹನ್ನೊಂದನೆಯ ಸ್ಕಂಧದಲ್ಲಿ ಶ್ರೀಕೃಷ್ಣನು ಉದ್ಧವನಿಗೆ ಉಪದೇಶಿದ ಭಾಗವು "ಉದ್ಧವ ಗೀತೆ" ಎಂದು ಹೆಸರಾಗಿದೆ. ಗಾತ್ರದಲ್ಲಿ ಇದು ಭಗವದ್ಗೀತೆಯ ಸುಮಾರು ಎರಡರಷ್ಟಿದೆ. ಸುಮಾರು ಸಾವಿರದ ಎರಡುನೂರು ಶ್ಲೋಕಗಳು. ಇದು ಶ್ರೀಕೃಷ್ಣನು ದೇಹತ್ಯಾಗ ಮಾಡುವ ಮೊದಲು ಜಗತ್ತಿಗೆ ನೀಡಿದ ಕೊನೆಯ ಸಂದೇಶ ಎನ್ನಬಹುದು.  

ಶ್ರೀಕೃಷ್ಣನು ತನ್ನ ಬಗ್ಗೆ ಗೋಕುಲದ ಗೋಪಿಯರ ಉತ್ಕಟ ಪ್ರೀತಿಯನ್ನು ಉದ್ಧವನಿಗೆ ಪರಿಚಯ ಮಾಡಿಸುವ ಸಲುವಾಗಿ ಅವನ ಮೂಲಕ ಗೋಪಿಯರಿಗೆ ಸಂದೇಶವೊಂದನ್ನು ಕಳಿಸಿಕೊಡುತ್ತಾನೆ. ಸಂದೇಶ ಕೊಂಡೊಯ್ದ ಉದ್ಧವನಿಗೆ ಗೋಕುಲದ ಪರಿಸರ, ಗೋಪಿಕೆಯರು ಶ್ರೀಕೃಷ್ಣನನ್ನು ಕಳೆದುಕೊಂಡು ಪರಿತಪಿಸುತ್ತಿರುವುದು, ಅವರ ಎಣೆಯಿಲ್ಲದ ಕೃಷ್ಣ ಭಕ್ತಿ, ಮುಂತಾದುವು ದಿವ್ಯವಾದ ಅನುಭವವನ್ನು ಕೊಡುತ್ತವೆ. ಅಕ್ರೂರ "ಬಿಲ್ಲು ಹಬ್ಬ" ನಿಮಿತ್ತ ಶ್ರೀಕೃಷ್ಣನನ್ನು ಕಂಸನ ಆದೇಶದ ಪ್ರಕಾರ ಕರೆತರಲು ಹೋದಾಗ ಗೋಕುಲದ ಹತ್ತಿರ ಹತ್ತಿರ ಬರುತ್ತಿದ್ದಂತೆ ಎಲ್ಲೆಲ್ಲೂ ಶ್ರೀಕೃಷ್ಣನ ಹೆಜ್ಜೆ ಗುರುತುಗಳನ್ನು ಕಂಡನಂತೆ. ಅವನ ಹೆಜ್ಜೆ ಮೇಲೆ ತಾನು ಹೆಜ್ಜೆಯಿಟ್ಟು ನಡೆಯುವುದು ಹೇಗೆ? ಅದು ಸಾಧ್ಯವಿಲ್ಲ. ಆದ್ದರಿಂದ ಅಲ್ಲಿಂದ ಮುಂದೆ ಮೊಣಕಾಲ ಮೇಲೆ ತೆವಳುತ್ತಾ ಹೋದನಂತೆ! ಉದ್ಧವನಿಗೂ ಅದೇ ಅನುಭವ ಆಯಿತು. 

ಶ್ರೀಕೃಷ್ಣ ಗೋಪಿಯರಿಗೆ "ಚಿಂತೆ ಮಾಡಬೇಡಿ. ಬಿಲ್ಲು ಹಬ್ಬಕ್ಕೆ ಹೋಗುತ್ತಿದ್ದೇನೆ. ಒಂದೇ ದಿನ. ನಾಳೆ ಬಂದುಬಿಡುತ್ತೇನೆ" ಎಂದು ಹೇಳಿ ಹೋದವನು. ಅವನು ಮತ್ತೆ ಗೋಕುಲಕ್ಕೆ ಬರಲೇ ಇಲ್ಲ. ಕಂಸನ ವಧೆಯ ನಂತರ ಮಥುರೆ ನಗರದಲ್ಲಿಯೇ ಉಳಿದನು. ನಂತರ ಜರಾಸಂಧನ ಕಾಟದ ಕಾರಣ ಸಮುದ್ರ ಮಧ್ಯದ ದ್ವಾರಕಾ ನಗರ ನಿರ್ಮಿಸಿ ಯಾದವರ ಸಹಿತ ಅಲ್ಲಿಗೆ ಹೊರಟು ಹೋದನು. ಸಂದೇಶ ತಂದ ಉದ್ಧವನನ್ನು ಕಂಡು ಗೋಪಿಯರಿಗೆ ಒಂದು ರೀತಿ ಶ್ರೀಕೃಷ್ಣನನ್ನು ಕಂಡಂತೆಯೇ ಆಯಿತು. ಕ್ಷಣ ಕಾಲ ಇಬ್ಬರಲ್ಲಿದ್ದ ಸಾಮ್ಯ ಕೆಲಸ ಮಾಡಿತು. ತಕ್ಷಣವೇ ವ್ಯತ್ಯಾಸ ಮುಂದೆ ಕಂಡಿತು. ಅವನಲ್ಲಿ ತಮ್ಮ ಅಳಲನ್ನು ತೋಡಿಕೊಂಡರು. ಅದನ್ನೇ ಶ್ರೀ ಗೋಪಾಲದಾಸರು "ನಾಳೆ ಬರುತೇನೆಂದು" ಕೃತಿಯಲ್ಲಿ ವಿವರಿಸಿದ್ದಾರೆ. 

ಉದ್ಧವನಿಗೆ ಗೋಪಿಯರು ಶ್ರೀಕೃಷ್ಣನಲ್ಲಿ ಇರಿಸಿದ್ದ ಅಪಾರ ಭಕ್ತಿ-ಪ್ರೇಮಗಳನ್ನು ಕಂಡು ಆಶ್ಚರ್ಯವೂ, ಹೀಗೂ ಇರಬಹುದೇ ಎನ್ನುವ ದಿಗ್ಭ್ರಮೆಯೂ ಆಯಿತಂತೆ. "ನನಗೆ ಇನ್ನೊಂದು ಜನ್ಮದಲ್ಲಿ ಗೋಕುಲದಲ್ಲಿ ಒಂದು ಮರವಾಗಿ, ಗಿಡವಾಗಿ ಅಥವಾ ಈ ಗೋಪಿಯರು ನಡೆದಾಡುವ ನೆಲದಲ್ಲಿ ಅವರ ಕಾಲ ಕೆಳಗೆ ಸಿಗುವ ಹುಲ್ಲಾಗಿ ಹುಟ್ಟಿಸು, ಕೃಷ್ಣಾ" ಅಂದನಂತೆ. ಗೋಪಿಯರ ಅಲೌಕಿಕ ಭಕ್ತಿ-ಪ್ರೇಮಗಳ ಪರಾಕಾಷ್ಠತೆ ಅಂತಹುದು. ಕೃಷ್ಣ-ಗೋಪಿಕೆಯರದು ಒಂದು ರೀತಿಯ ಚೆಲ್ಲಾಟ ಅನ್ನುವವರಿಗೆ ಅದು ಅರ್ಥವಾಗುವುದಿಲ್ಲ.  

*****

"ನಾಳೆ ಬರುತೇನೆಂದು ಹೇಳಿ ಮಧುರೆಗೆ ಪೋಗಿ ಬಹಳ ದಿನ ಆಯಿತಲ್ಲೋ, ಉದ್ಧವಾ" ಅನ್ನುವ ಕೃತಿ ಐದು ನುಡಿಗಳದ್ದು. ದುಃಖಿತ ಮನಸ್ಸುಗಳ ಓಟ ಯಾವುದೇ ತರ್ಕಬದ್ಧ ವ್ಯವಹಾರಕ್ಕೆ ಒಗ್ಗುವುದಿಲ್ಲ. ಅಂತಹ ವ್ಯಕ್ತಿಯ ಚಿಂತನೆ ಹೀಗೊಮ್ಮೆ-ಹಾಗೊಮ್ಮೆ ಲೋಲಕದಂತೆ ತೂಗಾಡುತ್ತದೆ. ಒಮ್ಮೆ ವಾಸ್ತವ ವಿಷಯಗಳ ನೆಲೆಗಟ್ಟಲ್ಲಿ ನಿಂತಿರುತ್ತದೆ. ಮರು ಕ್ಷಣ ಕಲ್ಪನೆಯಲ್ಲಿ ಓಡುತ್ತದೆ. ಮತ್ತೊಂದು ಕ್ಷಣ ಜ್ಞಾನಿಯಂತೆ ಚಿಂತಿಸುತ್ತದೆ. ತಕ್ಷಣವೇ ಹುಚ್ಚನಂತೆ ಅಲೆದಾಡುತ್ತದೆ. ಗೋಪಿಯರ ಉದ್ಧವನ ಬಳಿ ಗೋಳಾಟ ಇದೆಲ್ಲವನ್ನೂ ಪ್ರತಿನಿಧಿಸುತ್ತದೆ. 

ಹಾಡನ್ನು ಕೇಳುವಾಗ ಈ ಕೆಳಗಿನ ಅಂಶಗಳನ್ನು ಗಮನಿಸಬಹುದು:
  • "ನಾವು ಹಳ್ಳಿಯ ಹೆಣ್ಣುಮಕ್ಕಳು. ದನ ಕಾಯುವವರು. ಚೆನ್ನಾಗಿ ಅಲಂಕರಿಸಿಕೊಳ್ಳಲು ತಿಳಿಯೆವು. ಅವನೋ ಮಥುರಾ ಪಟ್ಟಣಕ್ಕೆ ಹೋದ. ನಗರದ ಸ್ತ್ರೀಯರ ಥಳಕು-ಬಳುಕಿನ ಮುಂದೆ ನಾವೆಲ್ಲಿ? ಅವರ ಮಧ್ಯದಲ್ಲಿ ಸೇರಿ ಅವನು ಅವನು ಮರೆತನು" ಅನ್ನುವರು. ಹೀಗೆ ಹೇಳಿದರೂ ಮರು ಕ್ಷಣವೇ "ಅವನ ಮಹಿಮೆ ತಿಳಿಯಲಿಲ್ಲ" ಎಂದು ಹಲಬುವರು. 
  • ಅವನು ಪರಮಾತ್ಮನು ಎಂಬ ಅರಿವು ತಕ್ಷಣವೇ ಮೂಡುತ್ತದೆ. "ಅವನು ನಮ್ಮ ಒನಪು-ವಯ್ಯಾರಗಳಿಗೆ ಸಿಗುವವನಲ್ಲ. ಅವನು ನಿತ್ಯ ತೃಪನಾದ ಆನಂದರೂಪ. ಅಂತಹವನು ನಮ್ಮ ಬೆಣ್ಣೆ ಕದ್ದ ಕಳ್ಳ ಎಂದು ಆರೋಪಿಸಿ ತಪ್ಪು ಮಾಡಿದೆವಲ್ಲಾ" ಎಂದು ಕೊರಗುತ್ತಾರೆ. 
  • "ಅನಾದಿ ಮೂರ್ತಿಯನ್ನು ನಮ್ಮ ಜೊತೆಯವನು ಎಂದುಕೊಂಡೆವು. ನಾವು ದರಿದ್ರರು. ಅವನೋ ಲಕ್ಷ್ಮೀರಮಣ. ಚತುರ್ಮುಖ ಬ್ರಹ್ಮನ ತಂದೆ. ನಮಗೆ ಹೇಗೆ ಕೈವಶನಾದಾನು?". ಹೀಗೆನ್ನುವಾಗ ಅವರ ಜ್ಞಾನದ ಮಜಲು ತಿಳಿಯುತ್ತದೆ. ಅದು ಒಂದು ಕ್ಷಣ ಕಾಲ ಜ್ಞಾನ. ಮತ್ತೆ ಅಜ್ಞಾನ ಆವರಿಸುತ್ತದೆ. 
  • ರಾಸಕ್ರೀಡೆ, ಜಲಕ್ರೀಡೆಯ ಕಡೆ ಮನಸ್ಸು ಕೊಟ್ಟು ನಮ್ಮ ಹತ್ತಿರದಲ್ಲೇ ಇದ್ದ ಪರಮಾತ್ಮನನ್ನು ನಾವು ತಿಳಿಯಲಿಲ್ಲ. ನಮ್ಮನು ಬಿಟ್ಟು ಇವನೆಲ್ಲಿ ಹೋದಾನು? ಹೀಗೆ ಯೋಚಿಸಿ ಅಹಂಕಾರದಿಂದ ವ್ಯವಹರಿಸಿದೆವು. ಕಾಲ ವ್ಯರ್ಥ ಆಯಿತು. ಮೋಸ ಹೋದೆವು" ಎಂದು ಮರುಗುತ್ತಾರೆ. 
  • "ಎಲ್ಲ ಗೋಪಿಯರು ಸೇರಿ ಅವನ ರಥದ ಸುತ್ತ ಮಲಗಿ ರಥ ನಿಲ್ಲಿಸಿ, ಅವನನ್ನು ಕಳಿಸಬಾರದಿತ್ತು. ಹಾಗೆ ಮಾಡಲಿಲ್ಲ" ಎಂದು ದುಃಖಿಸುತ್ತಾರೆ. ಹಾಗೆ ಮಾಡಲು ಸಾಧ್ಯವಿಲ್ಲ ಎಂದು ಗೊತ್ತು. ಆದರೆ ದುಃಖ ಹಾಗೆ ಹೇಳಿಸುತ್ತದೆ. ಉದ್ಧವನನ್ನೇ ಮುಂದಿನ ದಾರಿ ತೋರಿಸಲು ಕೇಳುತ್ತಾರೆ.
ಕೃಷ್ಣ ಹೋದಂದಿನಿಂದ ಗೋಪಿಯರಿಗೆ ಜೀವನದಲ್ಲಿ ಉತ್ಸಾಹವೇ ಹೋಯಿತು. ಆಮೇಲೆ ಹೇಗೆ ಬದುಕಿದರೋ ಅವರಿಗೇ ಗೊತ್ತಿಲ್ಲ. ಇದು ಅವರ ಪರಿಸ್ಥಿತಿ. (ಮೇಲಿನ ಚಿತ್ರದಲ್ಲಿ ಉದ್ಧವನು ಅವರನ್ನು ನೋಡಿದಾಗ ಅವರು ಇದ್ದ ರೀತಿಯನ್ನು ಚಿತ್ರಿಸಿದ್ದಾರೆ). ಇದು ಉದ್ಧವನು ಗೋಕುಲದಲ್ಲಿ ಕಂಡ ನೋಟ.

*****

ಎಂತಹ ತಪಸ್ವಿಗಳಿಗೂ, ಸಾಧಕರಿಗೂ ಪರಮಾತ್ಮನ ನೋಟ, ಸಾನ್ನಿಧ್ಯ ಸದಾಕಾಲವೂ ಇರುವುದಿಲ್ಲ ಎನ್ನುವುದು ಒಂದು ಪ್ರಮೇಯ. ಅವರವರ ಸಾಧನೆಗೆ ತಕ್ಕಂತೆ ಅದು ಸಿಗುತ್ತದಂತೆ. ಬಹುತೇಕ ಅದು ಮಿಂಚಿನಂತೆ ಒಂದು ಕ್ಷಣ ಕಂಡು ಮಾಯಾವಾಗುತ್ತದೆ ಅನ್ನುತ್ತಾರೆ, ತಿಳಿದವರು. ಗೋಪಿಕೆಯರಿಗೆ ಅಷ್ಟು ಕಾಲ ಶ್ರೀಕೃಷ್ಣನು ಸಿಕ್ಕಿದ್ದೇ ಹೆಚ್ಚು. ಆದ್ದರಿಂದ ಅವರು ಧನ್ಯರು!

ಶ್ರೀ ಅನಂತ ಕುಲಕರ್ಣಿ ಅವರು ಹಾಡಿರುವ ಈ ಗೀತೆಯನ್ನು ಕೆಳಗೆ ಕ್ಲಿಕ್ ಮಾಡಿ ಕೇಳಬಹುದು:

Saturday, October 1, 2011

Ahead of us or behind us?

Saint Kanakadaasa is a famous Kannada poet, philosopher and social reformer. He was a Shepherd chieftain, king of a small province and after a bitter battle with his enemies gave up his post and spent rest of his life in total devotion to the Lord.  He lived during the 16th century and was a contemporary of Saint Purandaradasa, who has composed several thousand kritis (compositions) and revered as the founder of the present Karnatic style of music.  Saint Thyagaraja, who lived after Saint Purandaradaasa and Kanakadaasa's time further enriched the Karnatic style of music. Contribution of these great men to music and literature cannot be described in words and deserves to be written in golden letters.

Legend has it that when Kanakadaasa was badly wounded in the war and about to die, Lord Balaji appeared in his dream state and brought to him to life subject to the condition that he would give up his state and become a Bhakta (devotee) of the Lord.  Kanakadaasa spent his later years in total devotion. He was with Saint Vyasaraja, Raajaguru of Sri Krishnadevaraaya, the Vijayanagar King. Towards the later part of his life, he traveled all over South India including Tirupathi, Udupi and many other places. He has composed several hundred Devaranaamas (songs in the praise of the Lord) as well as songs with social reform as the goal. His major works are Mohana Tarangini, Hari Bhakti Saara, Rama Dhanya Charitre and Nala Charitre. His works have great literary value and long lasting impact on the society. He himself faced severe persecution from a section of the society but overcame the difficulties with his patience and perseverance. Some of his compositions are in the form of riddles and known as "Kanaka's Mandige", the word Mandige meaning a sweet dish cooked on a hot earthen pot (like tandoori rotis made in the hot oven).  The item is difficult to prepare but very tasty to eat. Some of Kanakadaaasa's writings are difficult to comprehend and require deep knowledge of mythology and philosophy to solve and understand them.  Some of his other writings are in very simple language and can be understood by one and all as well.  His Rama Dhanya Charitre needs a special mention and is the story of an imaginary conflict between two corns, Ragi and Paddy, and their dispute solved by Srirama. The story is symbolic of class struggle of those times and upholds the dignity of labour and the philosophy that the working class is the real backbone of the society and not the elite class.

Legends have it that once Lord Thimmappa (Balaji of Tirupathi) told Kanaka in his dream to come over to Thirupathi. Balaji appeared in the dream of the Dharmadarshi (person in-charge of the temple affairs) that one of his greatest devotees is coming to have his Darshan and he should be received with respect and proper arrangements be made for his stay. Balaji is known as the Lord of the Seven Hills (Saptagirivaasa in sanskrit and Edukundalavaada in Telugu) and in those days one had to climb the hills on foot to reach the main temple on the top of the hills. There is a practice of receiving VIPs in Tirupati by symbolically presenting the keys to the temple. The temple keys (or their replica) are carried in a palanquin with full honour. Dharmadarshi and his associates were coming down the hill with the palanquin of temple keys and enquiring with people going up the hill as to whether anyone has seen the Saint Kanakadaasa climbing the hill.  Kankadaasa lived a simple life and was climbing the hill with his Ekanaada (one stringed musical instrument) and singing songs in the praise of the Lord.  In the middle of the hill Dharmadarshi was enquiring with all devotes climbing the hills whether they saw Saint  Kanakadaasa. Since he kept a low profile, nobody knew him.  Dharmadarshi asked Kanaka himself whether he saw Kanakadaasa climbing the hill. Kanakadaasa replied in the affirmative. Dharmaadhikari asked him where he was.  Kanaka replied; "Ahead of those who are behind him and Behind those who are ahead of him".  Dharmadarshi could not understand the deep meaning of Kanaka's words and felt he was a mad fellow and went further down the hill in search of the saint. Unable to find him he came back and went home. Kanaka himself climbed the hill, could not find any food and accommodation and slept in some corner of the temple.

In the night Lord Balaji appeared in the dream of the Dharmadarshi and admonished him for ignoring his commands. Dharmadarshi was told that the person who answered him in a riddle was himself Saint Kanakadaasa. Woken up after the dream,  Dharmadarshi and his assistants searched the Saint in the middle of the night, apologised to him and thereafter made suitable arrangements for his stay and darshan of the Lord. The saint lived in Tirupati for some time and made many compositions in the praise of Lord Balaji.

What Saint Kanakadaasa said was an example of his philosophical outlook. It was relativity explained much before Issac Newton, nearly a century before. As the Saint said, we are all younger to those who are older than us and older than those who are younger to us;  We are the followers of our leaders and leaders of our followers and marching on the journey of life Ahead of those behind us and Behind those who are ahead of us.