Tuesday, February 27, 2024
ಕೆರೆಯ ಪದ್ಮರಸನ "ದೀಕ್ಷಾಬೋಧೆ"
Monday, February 26, 2024
Ancient View On Types Of Plants
- Herbs are short-sized plants. Their stems are soft, delicate and can be easily bent. They have a short life cycle and usually live for one or two years. They have few branches or do not have branches.
- Shrubs are medium-sized plants. They grow taller than herbs but shorter than trees. They have hard and woody stems with branches. The stems can be bent easily and have relatively longer life span than herbs.
- Trees are longest living plant types and grow tall with many branches, with some exceptions like coconut and palm trees which have no branches. They have strong trunks and provide valuable wood for many uses like making furniture and used in building constructions.
- Climbers have thin, long and weak stems which cannot stand upright on their own. But they can grow vertically with external support and bear their own weight.
- Creepers are plants that stay on the ground, spread out and grow. They have thin, long and very fragile stems and cannot bear their own weight.
- Oshadi (ओषधिः): These are plants that die after delivering their next generation. Examples are Paddy, Ragi, Wheat, Banana etc. The interesting thing about this classification is that the life of plant ends with the birth of next generation!
- Vanaspati (वनस्पति): These are plants and trees that give out fruits without flowering. Usually flowering precedes fruit bearing. But in the case of Vanaspati, the plants give fruits directly without flowering. Example is Pippala or Bodhi or Peepul tree or Sacred Fig (Aswatha).
- Lataa (लता): These are creepers and is the same as creepers referred above. They cannot stand erect on their own but can grow upwards with support of others like trees, pillars etc.
- Druma (द्रुम): These are plants or trees that first flower and then give fruits. There are many such trees with best examples being Mango, Jackfruit etc. Most of the fruit yeilding trees are in this category.
- Virudha (विरुधः): This is same as Shrubs mentioned above. They grow up to three or four feet, have many branches with soft stems and can be easily bent.
- Twaksaara (त्वक् सार): These are plants which have their strength only in the outer shell, but do not have anything inside them. Best example is the Bamboo family. Twak means skin. Saara means essence. Inside portion is hallow and the strength of the plant is in its outer shell or skin.
Saturday, February 17, 2024
ಒಬ್ಬರ ಹಿಂದೆ ಮತ್ತೊಬ್ಬರು!
Friday, February 16, 2024
ಕರಡಿಗೆಯಿಂದ ಬಂದ ಕರಡಿ
Tuesday, February 13, 2024
ಅಳಿಯ ಅಲ್ಲ; ಮಗಳ ಗಂಡ
"ದೇಶ ಸುತ್ತು, ಕೋಶ ಓದು" ಅಥವಾ "ದೇಶ ಸುತ್ತಿ ನೋಡು, ಕೋಶ ಓದಿ ನೋಡು" ಅನ್ನುವುದು ಕೆಲವು ದಶಕಗಳ ಹಿಂದೆ ಬಹಳ ಪ್ರಚಲಿತವಾದ ಗಾದೆ ಮಾತಾಗಿತ್ತು. ಅನುಭವದಿಂದ ಬಂದ ಜ್ನ್ಯಾನವನ್ನು ನಮ್ಮ ಹಿರಿಯರು ಗಾದೆಗಳ ರೂಪದಲ್ಲಿ ಕೊಡುತ್ತಿದ್ದರು. "ವೇದ ಸುಳ್ಳಾದರೂ ಗಾದೆ ಸುಳ್ಳಾಗದು" ಎನ್ನುವುದು ಗಾದೆಗಳಿಗೆ ಸಂಭಂದಿಸಿದ ಇನ್ನೊಂದು ಗಾದೆ. ಇದೊಂದು ತಗಾದೆ ಇಲ್ಲದ ಗಾದೆ! ಪುಸ್ತಕದ ಜ್ನ್ಯಾನಕ್ಕಿಂತ ಅನುಭವದ ಜ್ನ್ಯಾನ ಹಿರಿದು ಎನ್ನುವುದನ್ನು ತಿಳಿಸುವ ಸಲುವಾಗಿ ಈ ಗಾದೆ.
ಜ್ನ್ಯಾನಾರ್ಜನೆಗೆ ಎರಡು ಪ್ರಮುಖವಾದ ದಾರಿಗಳು. ಗ್ರಂಥಗಳನ್ನು ಅಭ್ಯಸಿಸುವುದರಿಂದ ತಿಳುವಳಿಕೆ ಪಡೆಯುವುದು ಒಂದು ದಾರಿ. ಹೊರಗಡೆಯ ಪ್ರಪಂಚದಲ್ಲಿ ತಿರುಗಾಡಿ ಜ್ನ್ಯಾನ ಸಂಪಾದನೆ ಮಾಡುವುದು ಇನ್ನೊಂದು ದಾರಿ. ಮೇಲೆ ಹೇಳಿದ ದೇಶ-ಕೋಶದ ಗಾದೆ ಇವೆರಡು ದಾರಿಗಳನ್ನೂ ಸೂಚಿಸುತ್ತದೆ. ಇದೇ ಕಾರಣಕ್ಕಾಗಿಯೇ ಪ್ರೌಢ ಶಾಲೆ ಮತ್ತು ಕಾಲೇಜುಗಳಲ್ಲಿ ಕಡೆಯ ವರ್ಷದ ವಿದ್ಯಾರ್ಥಿಗಳನ್ನು "ವಾರ್ಷಿಕ ಪ್ರವಾಸ" ಕರೆದುಕೊಂಡು ಹೋಗುತ್ತಿದ್ದುದು.
ಇವೆರಡೂ ಅಲ್ಲದೆ ಇನ್ನೊಂದು ವಿಶೇಷವಾದ ದಾರಿ ಇದೆ. ಅದು ತಿಳಿದವರ ಒಡನಾಟ. ಜ್ನ್ಯಾನಿಗಳ ಸಂಗದಲ್ಲಿ ಕಾಲ ಕಳೆದರೆ ಅವರ ಕಲಿಕೆಯ ಒಂದು ಪಾಲು ನಮಗೂ ಸೇರುತ್ತದೆ. "ಮೀನು ಮಾರುವವಳನ್ನು ಮುದ್ದಾಡುವುದಕ್ಕಿಂತ ಗಂಧ ಮಾರುವವಳ ಜೊತೆ ಗುದ್ದಾಡುವುದು ಲೇಸು" ಎನ್ನುವುದು ಇನ್ನೊಂದು ತುಂಟ ಗಾದೆ! ಕೆಡುಗರ ಜೊತೆ ಸ್ನೇಹಕ್ಕಿಂತ ಸಜ್ಜನರ ಜೊತೆ ಹಗೆತನವೇ ವಾಸಿ. ಅಂದಮಾತ್ರಕ್ಕೆ ಸಜ್ಜನರ ಜೊತೆ ಜಗಳ ಮಾಡಬೇಕೆಂದು ಅರ್ಥವಲ್ಲ. ಒಳ್ಳೆಯವರ ಜೊತೆಯ ದ್ವೇಷವೂ ಒಳ್ಳೆಯದನ್ನೇ ಉಂಟು ಮಾಡುತ್ತದೆ ಎಂದರೆ ಅವರ ಜೊತೆ ಪ್ರೀತಿಯ ಫಲ ಇನ್ನೂ ಹೆಚ್ಚಿನ ಹಿತವನ್ನು ಮಾಡುತ್ತದೆ ಎನ್ನುವುದು ಇದರ ತಾತ್ಪರ್ಯ. ಆದ್ದರಿಂದ ಹುಡಿಕಿಕೊಂಡು ಹೋಗಿ ಸಜ್ಜನರ ಸಂಗ ಮಾಡಬೇಕು ಎನ್ನುವುದು ಇದರ ಆಶಯ.
ಮೇಲಿನ ಗಾದೆಯಲ್ಲಿ ಕೋಶ ಎನ್ನುವ ಪದ "ಗ್ರಂಥ ಕೋಶ" ಎನ್ನುವುದನ್ನು ಸೂಚಿಸುತ್ತದೆ. ಕೋಶ ಎನ್ನುವ ಪದಕ್ಕೆ ಇನ್ನೊಂದು ಅರ್ಥ ಭಾಷೆ, ಮಾತು ಮತ್ತು ಅದರ ಉಪಯೋಗಕ್ಕೆ ಸಂಭಂದಿಸಿದ್ದು. ಈ ಸಂದರ್ಭದಲ್ಲಿ ಇಂಗ್ಲಿಷಿನ "ಡಿಕ್ಷನರಿ" ಮತ್ತು "ಥೆಸರುಸ್" (Dictionary and Thesaurus) ಪದಗಳನ್ನು ನೆನೆಸಿಕೊಳ್ಳಬಹುದು. ಸಾವಿರಾರು ವರ್ಷಗಳ ಹಿಂದೆಯೇ ನಮ್ಮ ದೇಶದಲ್ಲಿ ಈ ರೀತಿಯ ಅನೇಕ ಕೋಶಗಳು ಪ್ರಚಲಿತವಿದ್ದವು. ಭಾಷೆಯಲ್ಲಿನ ಪದಗಳ ಅರ್ಥಗಳು, ಸಮಾನಾರ್ಥ ಮತ್ತು ವಿರುದ್ದಾರ್ಥ ಪದಗಳನ್ನು ತಿಳಿಯಲು ಈ ಕೋಶಗಳನ್ನು ಉಪಯೋಗಿಸುತ್ತಿದ್ದರು. ಅಮರಸಿಂಹನ "ಅಮರಕೋಶ" ಅವನ ಕಾಲದವರೆಗೆ ಪ್ರಚಲಿತವಿದ್ದ ಅನೇಕ ಕೋಶಗಳನ್ನು ಸಂಗ್ರಹಿಸಿ ಕೊಟ್ಟಿರುವ ಒಂದು ಕೋಶ. ಅದೆಲ್ಲ ಕಾಗದ, ಅಚ್ಚು, ಇಂಕು ಇಲ್ಲದ ಕಾಲ. ಆದ ಕಾರಣ ಕಲಿಯುವ ಮಕ್ಕಳಿಗೆ ಚಿಕ್ಕಂದಿನಿಂದಲೇ ಇಂತಹ ಕೋಶಗಳನ್ನು ಪ್ರತಿದಿನ ಸಂಜೆ ಉರು ಹೊಡೆಸುತ್ತಿದ್ದರು.
*****
ಒಂದು ವಾಕ್ಯದಲ್ಲಿ ಒಮ್ಮೆ ಪ್ರಯೋಗಿಸಿದ ಪದವನ್ನು ಮತ್ತೆ ಉಪಯೋಗಿಸಬಾರದು ಎಂದು ಭಾಷಾ ಶಾಸ್ತ್ರಜ್ಞರು ಹೇಳುತ್ತಾರೆ. (ಕಾವ್ಯಗಳಲ್ಲಿ ಬೇಕೆಂದೇ ಈ ರೀತಿ ಉಪಯೋಗಿಸುವ ಪುನರುಕ್ತಿ ವಿಷಯ ಬೇರೆ). ಪ್ರತಿ ಭಾಷೆಯಲ್ಲಿಯೂ ವಿಪುಲವಾದ ಪದಸಂಪತ್ತಿದೆ. ಇರುವ ಈ ಪದಗಳ ಭಂಡಾರವನ್ನು ಚೆನ್ನಾಗಿ ತಿಳಿಯಲಿ ಮತ್ತು ಅವುಗಳ ಉಪಯೋಗವನ್ನು ಮಾಡಲಿ ಎಂದು ಈ ರೀತಿ ಹೇಳುವುದು. ಈ ಕಾರಣಕ್ಕಾಗಿ ಕೋಶಗಳನ್ನು ಉಪಯೋಗಿಸಿ ಸಮಾನಾರ್ಥ ಪದಗಳನ್ನು ಹೊರ ತೆಗೆದು ಬಳಸುವುದು. ಆದರೆ ಕೋಶಕಾರರು ಸಮಾನಾರ್ಥ ಪದಗಳನ್ನು ಕೊಟ್ಟಾಗ ಈ ರೀತಿ ಕೊಟ್ಟಿರುವ ಅನೇಕ ಪದಗಳಲ್ಲಿ ಹೆಚ್ಹೂ ಕಡಿಮೆ ಒಂದೇ ಅರ್ಥ ಬಂದರೂ ಅನೇಕ ಪದಗಳಲ್ಲಿ ಸೂಕ್ಷ್ಮವಾದ ಅರ್ಥ ವ್ಯತ್ಯಾಸಗಳು ಇರುತ್ತವೆ. ಅಡುಗೆ ಮನೆಯಲ್ಲಿ ಇರುವ ಸೌಟುಗಳನ್ನೇ ತೆಗೆದುಕೊಳ್ಳೋಣ. ಅಲ್ಲಿ ಅನೇಕ ಸೌಟುಗಳು ಇವೆ. ಪ್ರತಿಯೊಂದೂ ಸೌಟೇ. ತುಂಬಾ ದೊಡ್ಡದರಿಂದ ಹಿಡಿದು ಪುಟ್ಟ ಸೌಟಿನವರೆಗೂ ಉಂಟು. ಹುಳಿ ಬಡಿಸಲು ದೊಡ್ಡ ಸೌಟು. ಪಾಯಸ ಬಡಿಸಲು ಅದಕ್ಕಿಂತ ಸಲ್ಪ ಚಿಕ್ಕದು. ಗೊಜ್ಜಿಗೆ ಇನ್ನೂ ಸ್ವಲ್ಪ ಚಿಕ್ಕದು. ಉಪ್ಪಿನಕಾಯಿಗೆ ಮತ್ತೂ ಸಣ್ಣದು. ಎಲ್ಲವೂ ಸೌಟು ಎಂದು ಹುಳಿ ಬಡಿಸುವ ಸೌಟಿನಲ್ಲಿ ಉಪ್ಪಿನಕಾಯಿ ಬಡಿಸಿದರೆ ಹೇಗೆ? ಪದಗಳ ಪ್ರಯೋಗದಲ್ಲಿಯೂ ಹಾಗೆ. ಆರಿಸಿದ ಪದ ನಾವು ಹೇಳಬೇಕೆನ್ನುವ ವಿಷಯವನ್ನು ಖಚಿತವಾಗಿ, ಕರಾರುವಾಕ್ಕಾಗಿ ಹೇಳಬೇಕು. ಇಲ್ಲದಿದ್ದಲ್ಲಿ ಏನೋ ಕೊರತೆ ಕಾಡುತ್ತದೆ.
ಪ್ರಪಂಚ ಪ್ರತಿ ದಿನ ಬದಲಾಗುತ್ತಲೇ ಇರುತ್ತದೆ. ನಿನ್ನೆ ಇದ್ದಂತೆ ಇಂದಿಲ್ಲ. ಇಂದು ಇರುವಂತೆ ನಾಳೆ ಇರುವುದಿಲ್ಲ. ಇನ್ನು ಹತ್ತು ವರುಷದ ನಂತರ ಅನೇಕ ವಿಷಯಗಳಲ್ಲಿ ಗುರುತು ಸಿಗದ ಬದಲಾವಣೆ ಕಾಣುತ್ತೇವೆ. ಪದಗಳ ಪ್ರಯೋಗದಲ್ಲೊ ಹಾಗೆ. ಇಂದು ವ್ಯಾಪಕವಾದ ಅರ್ಥ ಇರುವ ಪದಕ್ಕೆ ಅಥವಾ ಪದಪುಂಜಕ್ಕೆ ಮುಂದೆ ಬೇರೆಯೇ ಅರ್ಥ ಹುಟ್ಟಿಕೊಳ್ಳಬಹುದು. ವಿಪರ್ಯಾಸವೆಂದರೆ ಕೆಲವರು ತಪ್ಪು ಪ್ರಯೋಗ ಮಾಡಿ, ಅದನ್ನೇ ಅನೇಕರು ಮುಂದುವರೆಸಿ, ಮುಂದೆ ಆ ತಪ್ಪೇ ಸರಿಯೆಂದು ಎಲ್ಲರೂ ತಿಳಿದು, ಆ ತಪ್ಪು ಪ್ರಯೋಗವೇ ಶಾಶ್ವತವಾಗಿ ಉಳಿಯಬಹುದು! "ಗತಾನುಗತಿಕೋ ಲೋಕಃ" ಎನ್ನುವಂತೆ ಅನೇಕರು ತಪ್ಪು ದಾರಿ ಹಿಡಿದರೆ ಅವರ ಹಿಂದೆ ಬರುವವರೂ ತಪ್ಪು ದಾರಿ ಹಿಡಿದಂತೆ!
*****
ಈ ಸಂದರ್ಭದಲ್ಲಿ "ಅಳಿಯ ಅಲ್ಲ; ಮಗಳ ಗಂಡ" ಎನ್ನುವ ಗಾದೆಯನ್ನೇ ನೋಡೋಣ. ಇದು ಬಹಳ ಚಾಲ್ತಿಯಲ್ಲಿರುವ ಒಂದು ಗಾದೆ. ಇದನ್ನು ಪ್ರಯೋಗಿಸದಿರುವವರೇ ವಿರಳ. ಇಂದಿನ ಈ ಗಾದೆಯ ಪ್ರಯೋಗದಲ್ಲಿ "ಇದಲ್ಲ. ಅದು" ಎನ್ನುವ ಬದಲು "ಎರಡೂ ಒಂದೇ" ಎನ್ನುವ ಅರ್ಥದಲ್ಲಿ ಪ್ರಯೋಗ ಆಗುತ್ತಿದೆ. "ಹೀಗೆ ಹೇಳುವ ಬದಲು ಹಾಗೆ ಹೇಳಿದರು. ಎಲ್ಲ ಒಂದೇ!" ಎನ್ನುವ ಅರ್ಥ. ಐವತ್ತು ಅರವತ್ತು ವರುಷಗಳ ಹಿಂದೆ ಹಾಗಿರಲಿಲ್ಲ. ಎರಡರ ನಡುವೆ ಬಹಳ ವ್ಯತ್ಯಾಸ ಇತ್ತು.
ಮಕ್ಕಳ ವಿವಾಹ ಸಂಬಂಧವಾದ ತೀರ್ಮಾನಗಳನ್ನು ವಧು ಅಥವಾ ವರನ ತಂದೆ-ತಾಯಿಗಳು ತೆಗೆದುಕೊಳ್ಳುತ್ತಿದ್ದರು. ವಿವಾಹ ವಧೂ-ವರರು ಇನ್ನೂ ಚಿಕ್ಕ ವಯಸ್ಸಿನವರಿದ್ದಾಗಲೇ ನಡೆಯುತ್ತಿತ್ತು. ಲಗ್ನದ ಸಂದರ್ಭದಲ್ಲಿ ವಧು ಮತ್ತು ವರರ ನಡುವೆ ಒಂದು ವಸ್ತ್ರದ ಅಂತರ್ಪಟ ಹಿಡಿದಿರುತ್ತಿದ್ದರು. ಅದನ್ನು ಸರಿಸಿದಾಗಲೇ ಹುಡುಗ ಮತ್ತು ಹುಡುಗಿ ಒಬ್ಬರನ್ನೊಬ್ಬರು ನೋಡುತ್ತಿದ್ದರು, ಎಂದು ಹೇಳಿದುದನ್ನು ನಾವು ನಮ್ಮ ಬಾಲ್ಯದಲ್ಲಿ ಕೇಳಿದ್ದೇವೆ. ಮೆಚ್ಚಿ ಮದುವೆಯಾದ ಜೋಡಿಗಳು ಅಪರೂಪ ಅಂದಿನ ಕಾಲದಲ್ಲಿ. ಹುಡುಗಿಯ ತಂದೆ-ತಾಯಿಯರಿಗೆ ಹುಡುಗನ ಜೊತೆ ನೇರ ಸಂಭಂದವಿತ್ತು. ಅವನು ಅಳಿಯ ಆಗುತ್ತಿದ್ದ. ಹುಡುಗಿ ಅತ್ತೆಯ ಮನೆಯಲ್ಲಿ ಸೊಸೆ ಆಗುತ್ತಿದ್ದಳು.
ಕಾಲಕ್ರಮದಲ್ಲಿ ಯುವಕ ಯುವತಿಯರಿಗೆ ಹೆಚ್ಚಿನ ಸ್ವಾತಂತ್ರ್ಯ ಸಮಾಜದಲ್ಲಿ ಸಿಕ್ಕಿತು. ವಿವಾಹವಾಗುವ ವೇಳೆಗೆ ಅವರಿಗೆ ಹೆಚ್ಚಿನ ವಯಸ್ಸೂ ತಿಳುವಳಿಕೆಯೂ ಇರುತ್ತಿದ್ದವು. ತಂದೆ-ತಾಯಿಯರಿಗೆ ತಿಳಿಸಿ, ಅವರ ಒಪ್ಪಿಗೆ ಪಡೆದು, ಕೆಲವರು ಮದುವೆ ಆಗುತ್ತಿದ್ದರು. ಕೆಲವರು ಮದುವೆಯಾದಮೇಲೆ ತಿಳಿಸುತ್ತಿದ್ದರು. ಇನ್ನೂ ಕೆಲವು ಜೋಡಿಗಳು ಹೆದರಿಕೆಯಿಂದ ಮದುವೆಯಾದುದನ್ನು ಕೆಲವು ಕಾಲ ಗುಟ್ಟಾಗಿ ಇಡುತ್ತಿದ್ದುದೂ ಉಂಟು. ಅನೇಕ ಸಂದರ್ಭಗಳಲ್ಲಿ ಹುಡುಗಿಯ ತಂದೆ ತಾಯಿಯರಿಗೆ ಮಗಳು ತಂದ ಹುಡುಗ ಇಷ್ಟವಾಗುತ್ತಿರಲಿಲ್ಲ. ಜಾತಿ, ಪಂಗಡ, ವಿದ್ಯೆ, ಅಂತಸ್ತು, ದೇಶ, ಭಾಷೆ, ವರಸಾಮ್ಯ, ಮೊದಲಾದ ಹತ್ತಾರು ಕಾರಣಗಳಿಂದ ಕುಟುಂಬಗಳಲ್ಲಿ ವಿರಸ ಮೂಡುತ್ತಿತ್ತು. ಕೆಲವು ಹಿರಿಯರು ಮಧ್ಯಸ್ಥಿಕೆ ವಹಿಸಿ ವಾತಾವರಣ ತಿಳಿ ಮಾಡಿ ಮದುವೆ ಮಾಡಿಸುತ್ತಿದ್ದ ಪ್ರಕರಣಗಳೂ ಇದ್ದವು. "ನೀನು ನನ್ನ ಮಗಳಲ್ಲ. ನಾನು ನಿನ್ನ ತಂದೆಯೂ ಅಲ್ಲ. ಇಂದಿಗೆ ನಮ್ಮಿಬ್ಬರ ಸಂಬಂಧ ಕಡಿದುಹೋಯಿತು" ಎಂದು ಹೇಳಿದ ಪ್ರಕರಣಗಳೂ ಬೇಕಾದಷ್ಟಿದ್ದವು. ಇಂತಹ ಪ್ರಕರಣಗಲ್ಲಿ ಸ್ವಲ್ಪ ದಿನ ಕಳೆದ ನಂತರ ಅಥವಾ ಮೊಮ್ಮಗುವಿನ ಆಗಮನದ ನಂತರ ಮತ್ತೆ ಕುಟುಂಬಗಳು ಒಂದಾಗುತ್ತಿದ್ದ ಸುಖಾಂತ್ಯದ ಕೆಲವು ಪ್ರಕರಣಗಳು ಇದ್ದರೂ, ಕೊನೆಯವರೆಗೆ ವಿರಸ ಮುಂದುವರೆದ ಸಂದರ್ಭಗಳೂ ಇದ್ದವು.
ಹುಡುಗಿಯ ತಂದೆ-ತಾಯಿಗಳು ಒಪ್ಪಿ ನಡೆದ ವಿವಾಹದಲ್ಲಿ ವರ ವಧುವಿನ ತಂದೆ-ತಾಯಿಯರಿಗೆ ಅಳಿಯ ಆಗುತ್ತಿದ್ದ. ಅವರಿಗೆ ಬೇಡದ ಸಂದರ್ಭಗಳಲ್ಲಿ ಹುಡುಗ ಅಳಿಯನಾಗದೇ ಮಗಳ ಗಂಡ ಆಗಿ ಉಳಿದುಬಿಡುತ್ತಿದ್ದ.
ಈ ವ್ಯತ್ಯಾಸ ಕೆಳಗಿನ ಎರಡು ಚಿತ್ರಗಳಿಂದ ಇನ್ನೂ ವಿಶದವಾಗಿ ತಿಳಿಯಬಹುದು:
ಅಳಿಯ
ಮೇಲಿನ ಚಿತ್ರದಲ್ಲಿ ಅಪ್ಪ-ಅಮ್ಮ, ಮಗಳು ಮತ್ತು ವರನ ಜೊತೆ ಮಧುರವಾದ ಸಂಭಂದ ಇದೆ. ಇಲ್ಲಿ ಮೂರು ಸಂಬಂಧ ಉಂಟು. ಮೊದಲನೆಯದು ತಂದೆ-ತಾಯಿ ಮತ್ತು ಮಗಳ ಸಂಬಂಧ. ಎರಡನೆಯದು ಮಗಳು ಮತ್ತು ಅವಳ ಗಂಡನ ಪತಿ-ಪತ್ನಿ ಸಂಬಂಧ. ಮೂರನೆಯದು ಅತ್ತೆ-ಮಾವ ಮತ್ತು ಅಳಿಯನ ನೇರ ಸಂಬಂಧ. ನೇರ ಸಂಬಂಧ ಅಂದರೆ ಇದರಲ್ಲಿ ಮಗಳ ಕೊಂಡಿಯಿಲ್ಲ. ಈ ರೀತಿ ಮೂರು ಮುಖದ ತ್ರಿಕೋಣಾಕೃತಿಯ ಸಂಬಂಧ ಇರುವಾಗ "ಅಳಿಯ" ಅನ್ನುವ ಪದಕ್ಕೆ ಸರಿಯಾದ ಅರ್ಥ ಸಿಗುತ್ತದೆ.
ಈಗ ಇನ್ನೊಂದು ಚಿತ್ರ ನೋಡೋಣ:
Friday, February 9, 2024
ಬಂದನೇನೇ? ರಂಗ ಬಂದನೇನೇ?
Saturday, February 3, 2024
ಮಹದಾದಿ ದೇವಾ ನಮೋ
ಅನೇಕ ದಶಕಗಳ ಹಿಂದೆ ನಾವು ಶಾಲೆಗಳಲ್ಲಿ ಕಲಿಯುತ್ತಿದ್ದಾಗ ಅಂದಿನ ಅಧ್ಯಾಪಕರು ಕೆಲವು ವಿಷಯಗಳನ್ನು ಒತ್ತಿ ಒತ್ತಿ ಹೇಳುತ್ತಿದ್ದರು. ಬರೆಯುವ ಅಕ್ಷರಗಳು ಗುಂಡಾಗಿ ಚೆನ್ನಾಗಿರಬೇಕು, ಬರವಣಿಗೆ ಸೊಟ್ಟಾಗಿರದೆ ನೇರವಾಗಿ ಬರೆಯಬೇಕು, ಸಂದರ್ಭಕ್ಕೆ ಸರಿಯಾದ ಪದಗಳನ್ನು ಉಪಯೋಗಿಸಬೇಕು, ಬರೆದುದನ್ನು ಬೇರೆಯವರು ಓದುವಾಗ ಓದುಗನಿಗೆ ಸುಲಭವಾಗಿ ಅರ್ಥ ಆಗಬೇಕು, ಮುಂತಾದವು. ಒಮ್ಮೆ ಉಪಯೋಗಿಸಿದ ಪದವನ್ನು ಆದೇ ವಾಕ್ಯದಲ್ಲಿ ಮತ್ತೆ ಉಪಯೋಗಿಸಬಾರದು; ಅದೇ ವಾಕ್ಯವೇನು, ಆ ಪ್ಯಾರಾದಲ್ಲಿಯೇ ಮತ್ತೆ ಉಪಯೋಗಿಸಬಾರದು ಎನ್ನುವುದು ಮತ್ತೊಂದು. ಹೀಗೆ ಮಾಡುವುದರಿಂದ ನಮ್ಮ ಪದಸಂಪತ್ತು ಹೆಚ್ಚುತ್ತದೆ ಎನ್ನುವ ಕಿವಿಮಾತು ಕೂಡ ಇದರ ಜೊತೆಯಲ್ಲಿ ಇರುತ್ತಿತ್ತು. ಐದು ಅಂಕಗಳು ತಪ್ಪಿಲ್ಲದ ಮತ್ತು ಅಚ್ಚುಕಟ್ಟಾದ ಬರವಣಿಗೆಗೆ ಎಂದು ಮೀಸಲು ಸಹ ಇಡುತ್ತಿದ್ದರು.
ನಾವು ಪ್ರಾಥಮಿಕ ಶಾಲಾ ತರಗತಿಗಳಲ್ಲಿ ಇದ್ದಾಗ (ಮೊದಲ ನಾಲ್ಕು ವರ್ಷಗಳು, ಅಂದರೆ ಇಂದಿನ ನಾಲ್ಕನೇ ತರಗತಿವರೆಗೆ) ಸ್ಲೇಟು ಮತ್ತು ಬಳಪ ಉಪಯೋಗಿಸುತ್ತಿದ್ದೆವು. ನೋಟ್ ಬುಕ್ಕು ಮತ್ತು ಪೆನ್ಸಿಲ್ ಅಥವಾ ಪೆನ್ನು ಕಂಡರಿಯೆವು. ಆ ಸ್ಲೇಟಿನ ಸುತ್ತ ಮರದ ಚೌಕಟ್ಟು ಇರುತ್ತಿತ್ತು. ಅಕ್ಷರ ಸರಿ ಇಲ್ಲದಿದ್ದರೆ ಉಪಾಧ್ಯಾಯರು ಆ ಸ್ಲೇಟಿನ ಚೌಕಟ್ಟಿನಿಂದಲೇ ಬೆರಳುಗಳ ಹಿಂದೆ ಹೊಡೆಯುತ್ತಿದ್ದರು. ಇಂದಿನಂತೆ ಶಿಕ್ಷಕರು ಮಕ್ಕಳಿಗೆ ಹೊಡೆದರೆ ಪೋಷಕರು ಶಾಲೆಗೇ ಹೋಗಿ ಜಗಳ ಆಡುತ್ತಿರಲಿಲ್ಲ. ಪ್ರತಿಯಾಗಿ "ನಮ್ಮ ಮಗನಿಗೆ ಚೆನ್ನಾಗಿ ಹೊಡೆಯಿರಿ. ಸರಿಯಾಗಿ ಬುದ್ಧಿ ಬರಲಿ" ಎಂದು ಹೇಳುವ ಪೋಷಕರೂ ಇದ್ದರು! ಮುದ್ದಾದ ಅಕ್ಷರಗಳಲ್ಲಿ ತಪ್ಪಿಲ್ಲದೆ ಬರೆಯುವ ವಿದ್ಯಾರ್ಥಿಗಳು ಅಧ್ಯಾಪಕರಿಗೆ ಅಚ್ಚು ಮೆಚ್ಚು.
ಅದಿನ್ನೂ ಕನ್ನಡ ನವೋದಯದ ಕಾಲ. ನವ್ಯ ಮತ್ತು ಬಂಡಾಯ ಎನ್ನುವವು ಇನ್ನೂ ಜನಿಸಿರಲಿಲ್ಲ. ಪಠ್ಯ ಪುಸ್ತಕದ ಪದ್ಯಗಳು ಸಾಮಾನ್ಯವಾಗಿ ಕನ್ನಡದ ಹೆಸರಾಂತ ಕಾವ್ಯಗಳ ಭಾಗವೋ ಅಥವಾ ನವೋದಯ ಹರಿಕಾರರ ಪದ್ಯಗಳೋ ಆಗಿರುತ್ತಿದ್ದವು. ಶಿಕ್ಷಕರು ಅವುಗಳಲ್ಲಿನ ಕಾವ್ಯಗುಣಗಳನ್ನು ಎತ್ತಿ ಹೇಳುತ್ತಿದ್ದರು. ಮಾಧ್ಯಮಿಕ ಮತ್ತು ಪ್ರೌಢ ಶಾಲೆಗಳಲ್ಲಿ (ಐದರಿಂದ ಹತ್ತನೇ ತರಗತಿಗಳು) ವಿದ್ಯಾರ್ಥಿಗಳಿಗೆ ಈ ವಿಷಯಗಳು ಸ್ವಲ್ಪಮಟ್ಟಿಗೆ ಅರ್ಥ ಆಗುತ್ತಿದ್ದವು. ಈ ಕಾರಣದಿಂದಲೇ ಆಗಿನ ಎಲ್ ಎಸ್ (ಲೋಯರ್ ಸೆಕೆಂಡರಿ, ಅಂದರೆ ಎಂಟನೇ ತರಗತಿವರೆಗೆ) ಓದಿದ್ದವರೂ ಕಾವ್ಯ-ನಾಟಕಗಳಲ್ಲಿನ ಸೊಗಸನ್ನು ಅರಿಯಬಲ್ಲವರಾಗಿದ್ದರು. ಅವರ ಮುಂದಿನ ಜೀವನದಲ್ಲಿ ಕೆಲವು ರಸ ನಿಮಿಷಗಳನ್ನು ಈ ಕಾರಣದಿಂದ ಪಡೆಯಬಲ್ಲವರಾಗಿದ್ದರು.
*****
ಶ್ರೀಮಹಾವಿಷ್ಣು ಅನೇಕ ಅವತಾರಗಳನ್ನು ಎತ್ತಿದ್ದರೂ ದಶಾವತಾರಗಳಿಗೆ ಹೆಚ್ಚಿನ ಮಹತ್ವ ಬಂದಿದೆ. ಇವುಗಳಲ್ಲಿಯೂ ಶ್ರೀರಾಮ ಮತ್ತು ಶ್ರೀಕೃಷ್ಣ ಅತಿಹೆಚ್ಚು ಪೂಜಿತರು. ಈ ಅವತಾರಗಳ ಗ್ರಂಥಗಳು ಮಹಾಕಾವ್ಯಗಳ ಸಾಲಿನಲ್ಲಿ ಅತಿ ಎತ್ತರದಲ್ಲಿ ನಿಂತಿದುದರಿಂದ ಈ ರೀತಿ ಇರಬಹುದು. ಇವೆರಡರ ನಂತರ ಅತಿ ಹೆಚ್ಚು ಪೂಜಿತವಾದ ರೂಪ ಶ್ರೀನರಸಿಂಹ. ಈ ಮೂರು ರೂಪಗಳಿಗೆ ಪ್ರಸಿದ್ಧವಾದ ನೂರಾರು ಕ್ಷೇತ್ರಗಳು ದೇಶ ವಿದೇಶಗಳಲ್ಲಿ ಹರಡಿವೆ.
ಮಹಾಭಾರತ, ಭಾಗವತಾದಿ ಗ್ರಂಥಗಳಲ್ಲಿ ಮಹಾವಿಷ್ಣುವಿನ ಅನೇಕ ಅವತಾರಗಳ ವರ್ಣನೆಯಿದೆ. ಸಾಮಾನ್ಯವಾಗಿ ಎಲ್ಲಾರೂಪಗಳನ್ನೂ "ಅಧ್ಭುತ" ಎಂದು ನಿರ್ದೇಶಿಸುತ್ತಾರೆ. ಆದರೆ ನರಸಿಂಹ ರೂಪವನ್ನು "ಅತ್ಯದ್ಭುತ" ಎಂದು ಹೇಳುತ್ತದೆ ಶ್ರೀಮದ್ಭಾಗವತ. ಎಲ್ಲ ರೂಪಗಳಲ್ಲಿಯೂ ವಿಶೇಷ ಸ್ಥಾನ ಶ್ರೀನರಸಿಂಹ ರೂಪಕ್ಕೆ. ನರಸಿಂಹ ಮಂತ್ರ ಹೇಳುತ್ತದೆ:
ಉಗ್ರಂ ವೀರಂ ಮಹಾವಿಷ್ಣುಮ್ ಜ್ವಲಂತಂ ಸರ್ವತೋಮುಖಮ್
ನೃಸಿಂಹಂ ಭೀಷಣಂ ಭದ್ರಂ ಮೃತ್ಯೋರ್ಮೃತ್ಯುಮ್ ನಮಾಮ್ಯಹಮ್
ನರಸಿಂಹರೂಪ ಮೃತ್ಯುವಿನ ಅಭಿಮಾನಿ ದೇವತೆಗಳಿಗೂ ಮೃತ್ಯು ಸ್ವರೂಪ. "ಕಠೋಪನಿಷತ್"ನಲ್ಲಿ ನಚಿಕೇತನಿಗೆ ಉಪದೇಶ ಮಾಡುವಾಗ ಯಮನು ಹೇಳುತ್ತಾನೆ: "ಮಹಾಪ್ರಳಯ ಕಾಲದಲ್ಲಿ ಮಹಾಪುರುಷನು ಎಲ್ಲವನ್ನೂ ತಿನ್ನುವಾಗ ಅವನಿಗೆ ನಾನು ಒಂದು ಉಪ್ಪಿನಕಾಯಿ!"
ನರಸಿಂಹ ಕ್ಷೇತ್ರಗಳಲ್ಲಿ ಒಂದು ವಿಶೇಷ ಕಾಣಬಹುದು. ಹೆಚ್ಚಿನವು ಬೆಟ್ಟ ಪ್ರದೇಶದಲ್ಲಿ ಇವೆ. ಬೆಟ್ಟದ ಮೇಲೆ ಯೋಗಾನರಸಿಂಹಸ್ವಾಮಿ ಮತ್ತು ಬೆಟ್ಟದ ಕೆಳಗೆ ತಪ್ಪಲಿನಲ್ಲಿ ಭೋಗಾನರಸಿಂಹಸ್ವಾಮಿ ಅಥವಾ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯಗಳು ಇರುತ್ತವೆ.
"ಅಹೋಬಲ ನರಸಿಂಹ ಕ್ಷೇತ್ರ" ಆಂಧ್ರ ಪ್ರದೇಶದ ಕರ್ನೂಲ್ ಪಟ್ಟಣದಬಳಿ ಇದೆ. ಇದೇ ಕ್ಷೇತ್ರದಲ್ಲಿ ನರಸಿಂಹಾವತಾರವಾಗಿ ನರಹರಿಯು ಹಿರಣ್ಯಕಶಿಪುವನ್ನು ಕೊಂದನು ಎಂದು ಪ್ರತೀತಿ. ಈ ಕ್ಷೇತ್ರಕ್ಕೆ "ಗರುಡಾದ್ರಿ" ಎನ್ನುವುದೂ ಇನ್ನೊಂದು ಹೆಸರು. ಇಲ್ಲಿ ಒಂಭತ್ತು ನರಸಿಂಹನ ದೇವಾಲಯಗಳು ಮತ್ತು ಇತರ ದೇವಾಲಯಗಳೂ ಇವೆ. ಶ್ರದ್ದಾಳು ಭಕ್ತರು ಜೀವನದಲ್ಲಿ ಒಮ್ಮೆಯಾದರೂ ಈ ಕ್ಷೇತ್ರ ದರ್ಶನ ಮಾಡಬೇಕೆಂದು ಆಶಿಸುತ್ತಾರೆ. ಭಾರ್ಗವ ನರಸಿಂಹ, ಯೋಗಾನಂದ ನರಸಿಂಹ, ಛತ್ರವಟ ನರಸಿಂಹ, ಅಹೋಬಲ ನರಸಿಂಹ ಅಥವಾ ಉಗ್ರ ನರಸಿಂಹ, ವರಾಹ ನರಸಿಂಹ, ಮಾಲೋಲ ನರಸಿಂಹ ಅಥವಾ ಸೌಮ್ಯ ನರಸಿಂಹ, ಜ್ವಾಲಾ ನರಸಿಂಹ, ಪಾವನ ನರಸಿಂಹ ಮತ್ತು ಕಾರಂಜ ನರಸಿಂಹ ಎಂದು ಈ ಒಂಭತ್ತು ನರಸಿಂಹ ದೇವಾಲಯಗಳು ಇಲ್ಲಿ ಇವೆ. ಕೆಲವರು ತಮ್ಮ ಮನೆಗಳಿಗೆ "ಮಾಲೋಲ" ಎಂದು ಹೆಸರಿಡುವುದು ಈ ಸೌಮ್ಯ ನರಸಿಂಹನ ನೆನಪಿನಲ್ಲಿಯೇ.
*****
ಶ್ರೀಪುರಂದರ ದಾಸರು ನಮ್ಮ ನಾಡು ಕಂಡ ಅತ್ಯಂತ ಪ್ರತಿಭಾಶಾಲಿ ಕವಿಗಳಲ್ಲಿ ಮೊದಲ ಎಣಿಕೆಯಲ್ಲಿ ನಿಲ್ಲುತ್ತಾರೆ. ಭಕ್ತಿಯ ಭರದಲ್ಲಿ ಅವರ ಪದ, ಸುಳಾದಿ, ಉಗಾಭೋಗಗಳಲ್ಲಿ ಕಾವ್ಯ ಗುಣಗಳನ್ನು ಮರೆಯುವುದೇ ಹೆಚ್ಚು. ಅವರ ಪ್ರತಿಯೊಂದು ಕೃತಿಯಲ್ಲಿಯೂ ಗಮನಿಸಿದರೆ ಅನೇಕ ಕಾವ್ಯ ಗುಣಗಳನ್ನು ಕಾಣಬಹುದು. ಅವರೊಬ್ಬ ವರಕವಿ. ಅವರೆಂದೂ ಹಲಗೆ-ಬಳಪ ಹಿಡಿದೋ, ಲೇಖನಿ ಹಿಡಿದೋ ಕೃತಿ ರಚನೆ ಮಾಡಿದಂತೆ ಕಾಣುವುದಿಲ್ಲ. ಅವರು ಹೇಳಿದ್ದೆಲ್ಲಾ ಪದವಾಯಿತು, ಹಾಡಾಯಿತು, ಕೃತಿಯಾಯಿತು. "ಕರ್ಣಾಟ ಸಂಗೀತ ಪಿತಾಮಹ" ಎಂದು ಕರೆಸಿಕೊಳ್ಳುವ ಅವರು ಸಾಹಿತ್ಯ-ಸಂಗೀತ ಎರಕದ ರಚನೆಗಳಿಗೆ ಕೊನೆಯ ಮಾತು.
ಶ್ರೀಪುರಂದರದಾಸರು ತಮ್ಮ ಜೀವಿತ ಕಾಲದಲ್ಲಿ ದೇಶವನ್ನೆಲ್ಲಾ ಸುತ್ತಿ ಅನೇಕ ತೀರ್ಥ ಕ್ಷೇತ್ರಗಳನ್ನು ಕಣ್ಣಾರೆ ನೋಡಿದವರು. ಪ್ರತಿ ಕ್ಷೇತ್ರದಲ್ಲಿ ಅಲ್ಲಲ್ಲಿನ ದೇವಾಲಯಗಳಲ್ಲಿ ಕೃತಿ ರಚನೆ ಮಾಡಿದವರು. ಉಡುಪಿ, ಫಂಡರಾಪುರ, ತಿರುಪತಿ, ಶ್ರೀರಂಗ, ಅಹೋಬಲ ಮುಂತಾದ ಕ್ಷೇತ್ರಗಲ್ಲಿ ಅವರು ರಚಿಸಿದ ಅನೇಕ ಕೃತಿಗಳು ಇಂದೂ ಹಾಡಲ್ಪಡುತ್ತಿವೆ. ಅವರ ಅಹೋಬಲ ನಾರಸಿಂಹನ ಕೃತಿಯ ಕೆಲವು ವಿಶೇಷಗಳನ್ನು ನೋಡೋಣ.
"ಮಹದಾದಿದೇವ ನಮೋ ಮಹಾಮಹಿಮನೇ ನಮೋ" ಎನ್ನುವುದು ಅಹೋಬಲದಲ್ಲಿ ರಚಿತವಾದ ಕೃತಿ. ಇದರ ಮೂರು ನುಡಿಗಳಲ್ಲಿ ಅವರು ನರಸಿಂಹಾವತಾರದ ಸಂಕ್ಷಿಪ್ತ ವರ್ಣನೆಯನ್ನು ಕೊಡುತ್ತಾರೆ.:
ಮಹದಾದಿ ದೇವಾ ನಮೋ ಮಹಾಮಹಿಮನೇ ನಮೋ
ಪ್ರಹ್ಲಾದವರದ ಅಹೋಬಲ ನಾರಸಿಂಹ
ಮೊದಲ ನುಡಿಯಲ್ಲಿ ನರಸಿಂಹನ ಉದ್ಭವದ ಭೀಷಣವನ್ನು ಹೇಳುತ್ತಾರೆ. ಅವರು ಉಪಯೋಗಿಸಿರುವ ಪದಗಳು ಆ ಅವತಾರ ಪ್ರಕಟವಾದ ಭಯಂಕರ ದೃಶ್ಯವನ್ನು ನಮಗೆ ಕೊಡುತ್ತವೆ.
ಧರಣಿಗುಬ್ಬಸವಾಗೆ ತಾರಾಪಥವು ನಡುಗೆ
ಸುರರು ಕಂಗೆಟ್ಟೋಡೆ ನಭವ ಬಿಟ್ಟು
ವನಗಿರಿಗಳಲ್ಲಾಡೆ ಶರಧಿಗಳು ಕುದಿದುಕ್ಕೆ
ಉರಿಯನುಗುಳುತ ಉದ್ಭವಿಸಿದೆ ನಾರಸಿಂಹಾ
ಸಕಲ ದೇವತೆಗಳ ಪ್ರಾರ್ಥನೆಯ ಮೇರೆಗೇ ಈ ಅವತಾರವಾದದ್ದು. ದೇವತೆಗಳು ಇದಕ್ಕಾಗಿ ಕಾತರದಿಂದ ಕಾಯುತ್ತಿದ್ದರು. ಆದರೆ ಆ ಅವತಾರದ ಭೀಕರತ್ವ ಅವರ ಊಹೆಗೂ ನಿಲುಕಲಿಲ್ಲ. ಅವರವರ ಸ್ಥಾನಗಳನ್ನೇ ಬಿಟ್ಟು ಸ್ವರಕ್ಷಣೆಗೆ ಓಡಿ ಹೋದರು! ಭದ್ರವಾಗಿ ನಿಲ್ಲುವ ಗುಣಕ್ಕೆ ಉದಾಹರಣೆಯಾದ ಬೆಟ್ಟಗಳೂ ಅದುರಿಹೋದವು. ಇಡೀ ಸೃಷ್ಟಿಯೇ ತಲ್ಲಣಿಸಿತು. ವಿಶಾಲ ಸಮುದ್ರದ ಜಲರಾಶಿ ಒಂದೇ ಕ್ಷಣದಲ್ಲಿ ಕುದ್ದು ಉಕ್ಕಿದವು!
ಪ್ರಕಟವಾದ ನರಸಿಂಹನು ರಕ್ಕಸನನ್ನು ಹೇಗೆ ಕೊಂದ ಎನ್ನುವುದು ಅವರು ವರ್ಣಿಸುವ ರೀತಿ:
ಸಿಡಿಲಂತೆ ಘರ್ಜಿಸುತ ಉರಿವ ನಾಲಗೆ ಚಾಚಿ
ಅಡಿಗಡಿಗೆ ಲಂಘಿಸುತ ಕೋಪದಿಂದ
ಮುಡಿಪಿಡಿದು ರಕ್ಕಸನ ಕೆಡಹಿ ನಖದಿಂದೊತ್ತಿ
ಕಡುಉದರ ಬಗೆದೆ ಕಡುಗಲಿ ನಾರಸಿಂಹಾ
ಸಿಂಹದ ಲಂಘನ; ಸಿಂಹ ಘರ್ಜನೆ. ಹಿರಣ್ಯಕನ ಜುಟ್ಟು ಹಿಡಿದು ಕುಕ್ಕಿ ಉಗುರಿಂದ ಬಗೆದ. ಗದೆ ಹಿಡಿದು ಹತ್ತು ನಿಮಿಷ ಹಿರಣ್ಯ ಯುದ್ಧ ಮಾಡುವುದು ಸಿನಿಮಾದಲ್ಲಿ ಮಾತ್ರ. ಹಿರಣ್ಯಕನ ವಧೆಯಾಯಿತು.
ಅವತಾರ ತಾಳಿದ ಮುಖ್ಯ ಕೆಲಸವಾಯಿತು. ದೇವತೆಗಳ ಮತ್ತು ಪ್ರಹ್ಲಾದನ ಪ್ರಾರ್ಥನೆಯಿಂದ ಈಗ ನರಸಿಂಹನು ಶಾಂತನಾಗಿದ್ದಾನೆ. ಲಕ್ಷ್ಮಿಯು ತೊಡೆಯಮೇಲೆ ಕುಳಿತಿದ್ದಾಳೆ. ಈಗ ಅವನು "ಮಾಲೋಲ" ಆಗಿದ್ದಾನೆ. ಪ್ರಹ್ಲಾದವರದ ರೂಪ ತಾಳಿದ್ದಾನೆ. ದಾಸರು ಉಪಯೋಗಿಸುವ ಪದಗಳೂ ಸೌಮ್ಯವಾಗುತ್ತವೆ:
ಸರಸಿಜೋದ್ಭವ ಹರ ಪುರಂದರಾದಿ ಸಮಸ್ತ
ಸುರರು ಅಂಬರದಿ ಹೂಮಳೆಯ ಕರೆಯೆ
ಸಿರಿಸಹಿತ ಗರುಡಾದ್ರಿಯಲಿ ನಿಂತು ಭಕುತರ
ಕರುಣಿಸಿದೆ ಪುರಂದರ ವಿಠಲ ನಾರಸಿಂಹ
ಪ್ರಹ್ಲಾದನಿಗೆ ಕರುಣಿಸಿದ್ದು ಆಯಿತು. ಈಗಲೂ ಬರುವ ಭಕ್ತರಿಗೆ ಕರುಣಿಸುತ್ತಿರುವೆ ಎನ್ನುವುದೇ ತಾತ್ಪರ್ಯ.
ಅತಿಯಾದ ಪಕ್ಕವಾದ್ಯಗಳ ಆಡಂಬರವಿಲ್ಲದೆ ಸಾಹಿತ್ಯಕ್ಕೆ ಒತ್ತುಕೊಟ್ಟು ಹಾಡಿರುವ ಅನೇಕ ಮುದ್ರಿಕೆಗಳು ಯೂಟ್ಯೂಬ್ನಲ್ಲಿ ಲಭ್ಯವಿವೆ.
*****
ನರಸಿಂಹನನ್ನು ವರ್ಣಿಸಲು ಕಠಿಣ ಪದಗಳನ್ನು ಪ್ರಯೋಗಿಸಿದ ದಾಸರು ಬಾಲಕೃಷ್ಣನನ್ನು ವರ್ಣಿಸಲು ಸರಳ ಸುಂದರ ಪದಗಳನ್ನು ಬಳಸುತ್ತಾರೆ.
ಅದನ್ನು ಇನ್ನೊಮ್ಮೆ ನೋಡೋಣ.